ಒಲವೇ ಮಂದಾರ ಪ್ರಯಾಣ ವಸ್ತುವುಳ್ಳ ೨೦೧೧ರ ಒಂದು ಕನ್ನಡ ಚಲನಚಿತ್ರ. ಚಿತ್ರವನ್ನು ಜಯತೀರ್ಥ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹೊಸಬರಾದ ಶ್ರೀಕಾಂತ್ ಹಾಗೂ ಆಕಾಂಕ್ಷಾ ಮನ್ಸುಖಾನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ವೀಣಾ ಸುಂದರ್, ನಾಸರ್ ಹಾಗೂ ಸಾಧು ಕೋಕಿಲ ನಟಿಸಿದ್ದಾರೆ. ಚಲನಚಿತ್ರದ ಉಪಕಥೆಯು ತನ್ನ ಹೆಂಡತಿಯ ನೆನಪಿನಲ್ಲಿ ರಸ್ತೆಯನ್ನು ನಿರ್ಮಿಸಲು ಒಂದು ಕಲ್ಲಿರುವ ಗುಡ್ಡವನ್ನು ೨೨ ವರ್ಷಗಳವರೆಗೆ ಕತ್ತರಿಸಿದ ದಶರಥ್ ಮಾಂಝಿಯ ನಿಜ ಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದಿದೆ. ದಿ ಟೈಮ್ಸ್ ಆಫ್‌ ಇಂಡಿಯಾ ನಡೆಸಿದ ಆನ್‍ಲೈನ್ ಜನಾಭಿಪ್ರಾಯ ಸಂಗ್ರಹಣೆಯನ್ನು ಆಧರಿಸಿ, ಚಲನಚಿತ್ರದಲ್ಲಿ ತಮ್ಮ ಅಭಿನಯಕ್ಕಾಗಿ ಶ್ರೀಕಾಂತ್‍ರನ್ನು 'ಭರವಸೆಯ ಹೊಸ ನಟ' ಎಂದು ಘೋಷಿಸಲಾಯಿತು. == ಕಥಾವಸ್ತು == ಒಬ್ಬ ಶ್ರೀಮಂತ ಉದ್ಯಮಿಯ (ನಾಸರ್) ಮಗನಾದ ಶ್ರೀಕಾಂತ್ (ಶ್ರೀಕಾಂತ್), ಕೊಯಂಬತ್ತೂರಿನ ಒಂದು ನೃತ್ಯ ಸ್ಪರ್ಧೆಯಲ್ಲಿ ಒಬ್ಬ ಅಸ್ಸಾಮಿ ಹುಡುಗಿಯಾದ ಪ್ರೀತಿಯನ್ನು (ಆಕಾಂಕ್ಷಾ ಮನ್ಸುಖಾನಿ) ಭೇಟಿಯಾಗಿ ಅವಳನ್ನು ಪ್ರೀತಿಸತೊಡಗುತ್ತಾನೆ. ಅವಳಿಂದ ಕೆಲವು ಮುತ್ತುಗಳನ್ನು ಪಡೆಯುವುದು ಮಾತ್ರ ಅವನ ಮೊದಲಿನ ಉದ್ದೇಶವಾಗಿರುತ್ತದೆ. ತಪ್ಪಿತಸ್ಥ ಭಾವನೆಯಿಂದ, ಅವಳಿಗೆ ಮಾತುಕೊಟ್ಟಂತೆ ಅವಳನ್ನು ಭೇಟಿಯಾಗಲು ಅಸ್ಸಾಂಗೆ ನಡೆದುಕೊಂಡು ಪ್ರಯಾಣ ಮಾಡುತ್ತಾನೆ. ತನ್ನ ಪ್ರಯಾಣದಲ್ಲಿ, ಅವನು ವಿವಿಧ ಪಾತ್ರಗಳನ್ನು ಭೇಟಿಯಾಗಿ ಘಟನೆಗಳನ್ನು ನೋಡಿ, ಉದಾಹರಣೆಗೆ ಒಬ್ಬ ರೈತ ದಂಪತಿ ತಮ್ಮ ಊಟವನ್ನು ಒಬ್ಬ ಕರುಣಾಳು ಕಳ್ಳನೊಂದಿಗೆ (ಸಾಧು ಕೋಕಿಲ) ಹಂಚಿಕೊಳ್ಳುತ್ತಿರುವುದು, ಒಬ್ಬ ಚಮ್ಮಾರ (ರಂಗಾಯಣ ರಘು) ತನ್ನ ಅಂಗವಿಕಲ ಹೆಂಡತಿಯನ್ನು ಕಾಶಿಗೆ ತೀರ್ಥಯಾತ್ರೆಗಾಗಿ ಚಕ್ಕಡಿ ಗಾಡಿ ಮೇಲೆ ಕರೆದುಕೊಂಡು ಹೋಗುತ್ತಿರುವುದು, ಜೀವನದ ವಾಸ್ತವಗಳನ್ನು ಎದುರಿಸುತ್ತಾನೆ. ಇವುಗಳನ್ನು ನೋಡಿ ಶ್ರೀಕಾಂತ್‍ನ್ ಮನ ಕರಗುತ್ತದೆ. ಅವನು ಪ್ರೀತಿ ವಾಸಿಸುವ ಅಸ್ಸಾಮ್‍ನಲ್ಲಿನ ರಾಣಿಗಾಂವ್ ಹಳ್ಳಿಯನ್ನು ಮುಟ್ಟಿದಾಗ, ಅವಳು ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗುತ್ತಿರುವುದನ್ನು ಕಾಣುತ್ತಾನೆ. == ಪಾತ್ರವರ್ಗ == == ಧ್ವನಿವಾಹಿನಿ == ದೇವಾ ಚಲನಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದರು ಮತ್ತು ಅದರ ಧ್ವನಿಪಥವನ್ನು ಸಂಯೋಜಿಸಿದರು. ಗೀತೆಗಳ ಸಾಹಿತ್ಯವನ್ನು ಕವಿರಾಜ್, ಕೆ. ಕಲ್ಯಾಣ್, ಕೆ. ವಿ. ರಾಜು, ಹಂಸಲೇಖ ಮತ್ತು ಜಯತೀರ್ಥ ಬರೆದಿದ್ದಾರೆ. "ಒಂದೇ ಕೇರಿಲಿ" ಹಾಡಿನ ಸಾಹಿತ್ಯವನ್ನು ಜಿ.ಪಿ.ರಾಜರತ್ನಂರ ಒಂದು ಕವಿತೆಯಿಂದ ತೆಗೆದುಕೊಳ್ಳಲಾಗಿದೆ. ಧ್ವನಿಸುರುಳಿ ಸಂಗ್ರಹದಲ್ಲಿ ಒಂಭತ್ತು ಹಾಡುಗಳಿವೆ. ಇದನ್ನು ಡಿಸೆಂಬರ್ ೨೦೧೦ರಲ್ಲಿ ಬಿಡುಗಡೆ ಮಾಡಲಾಯಿತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == === ೫೯ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ === ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ – ಜಯತೀರ್ಥ ನಾಮನಿರ್ದೇಶಿತ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ – ರಂಗಾಯಣ ರಘು ನಾಮನಿರ್ದೇಶಿತ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ – ವೀಣಾ ಸುಂದರ್ === ೨೦೧೧ರ ಬೆಂಗಳೂರು ಟೈಮ್ಸ್ ಫ಼ಿಲ್ಮ್ ಅವಾರ್ಡ್ಸ್ === ಭರವಸೆಯ ಹೊಸ ನಟ – ಶ್ರೀಕಾಂತ್ === ೧ನೇ ಸೀಮಾ ಪ್ರಶಸ್ತಿಗಳು === ಅತ್ಯುತ್ತಮ ಹೊಸ ನಟ (ಕನ್ನಡ) – ಶ್ರೀಕಾಂತ್ ಅತ್ಯುತ್ತಮ ಹೊಸ ನಟಿ (ಕನ್ನಡ) – ಆಕಾಂಕ್ಷಾ ಮನ್ಸುಖಾನಿ == ಉಲ್ಲೇಖಗಳು ==